Events


Aug 25th, 2019

ಶ್ರಾವಣ ಸಂಭ್ರಮ (ಸೋಣದ ಗೌಜಿ)

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಶ್ರಾವಣ ಸಂಭ್ರಮ (ಸೋಣದ ಗೌಜಿ) ಎಂಬ ಕಾರ್ಯಕ್ರಮವನ್ನು ಜೊತೆಗೆ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Aug 10th, 2014

ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ )

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರಿಗಾಗಿ ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ ) ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.


ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ )

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರಿಗಾಗಿ ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ ) ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ದಿನಾಂಕ 10 /08/2014 ರಂದು ಬೆಂಗಳೂರಿನ ಸ್ಪೇಸ್ ರೆಸಿಡೆನ್ಸಿ ಕಮ್ಯೂನಿಟಿ ಹಾಲ್ ಜೀವನ ಭೀಮ ನಗರ್ ದಲ್ಲಿ 220 ಕ್ಕೂ ಅಧಿಕ ಸಹೃದಯಿ ದೇವಾಡಿಗ ಸಮಾಜ ಬಾಂಧವರ ಸಮಕ್ಷಮದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಿತು . ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ಅದ್ಯಕ್ಷ ಶ್ರೀ ಹರಿ ದೇವಾಡಿಗ ಇವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಓ . ಎಂ ದೇವಾಡಿಗ , ಶೀನ ದೇವಾಡಿಗ ಮರವಂತೆ ,ಅಶೋಕ್ ಗಂಗೊಳ್ಳಿ , ರವಿಶಂಕರ್ ಉಳ್ಳಾಲ್ , ಚಂದ್ರ ಮರವಂತೆ , ಚಿತ್ರಲೇಖ ದೇವಾಡಿಗ , ರಾಜೇಶ್ವರಿ ಹರಿ ದೇವಾಡಿಗ , ಗೀತ ಮಂಜುನಾಥ್ ,ಭಾಗವಹಿಸಿದ್ದರು .

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರದಾನ ಕಾರ್ಯದರ್ಶಿ ಚಂದ್ರ ಮರವಂತೆ ನಾನು ಎಂಬುದರಿಂದ ಬರಿ ಒಂದು ಶಬ್ದ ಹೊರಹೊಮ್ಮುತ್ತದೆ ಅದರ ಬದಲಾಗಿ ನಾವು ಎನ್ನುವುದರಿಂದ ಸಂಘಟಿತ ಶಕ್ತಿ ಪ್ರದರ್ಶನ ಗೊಳ್ಳುತ್ತದೆ ಎಂದರು , ಬೆಂಗಳೂರಿನಲ್ಲಿ ದೇವಾಡಿಗ ನವೋದಯ ಸಂಘದಲ್ಲಿ ದೇವಾಡಿಗರು ಸಂಘಟಿತರಾಗಿದ್ದಾರೆ ಎನ್ನಲು ಇಲ್ಲಿ ನೆರೆದಿರುವ ಜನಸಾಗರವೇ ಸಾಕ್ಷಿ ಎಂದರು ,ಸಂಘದಲ್ಲಿ ಸಂಘಟನೆಗೆ ಒತ್ತು ಕೊಡಬೇಕು ವ್ಯಕ್ತಿ ಪೂಜೆಯಿಂದ ಸಂಘದ ಏಳ್ಗೆ ಸಾದ್ಯವಿಲ್ಲ ಬದಲಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಬೆಳೆಸಿದಾಗ ಆ ಸಂಘ ಉತ್ತುಂಗದ ಶಿಖರ ಏರುತ್ತದೆ ಎಂದರು. ಮುಖ್ಯ ಅತಿಥಿ ಉದ್ಯಮಿ ಓ . ಎಂ ದೇವಾಡಿಗ ಮಾತನಾಡುತ್ತಾ ದೇವಾಡಿಗ ನವೋದಯ ಸಂಘ ತನ್ನ ಕಾರ್ಯ ದಕ್ಷತೆಯ ಮೂಲಕ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದೆ ಹಾಗು ಈ ಸಂಘದಲ್ಲಿ ಕಾರ್ಯದಕ್ಷತೆ , ನಿಸ್ವಾರ್ಥ ಸೇವೆ , ಸಂಘ ಕಟ್ಟುವುದರಲ್ಲಿ ಸದಸ್ಯರು ತೋರುತ್ತಿರುವ ಉತ್ಸಾಹ ವಯಕ್ತಿಕವಾಗಿ ನನಗೆ ಬಹಳ ಖುಷಿ ನೀಡಿದೆ ಮುಂದೊಂದು ದಿನ ಈ ಸಂಘ ಮಾದರಿ ಸಂಘ ವಾಗುತ್ತದೆ ಎಂದರು .

ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ವರಿ ಹರಿ ದೇವಾಡಿಗ ಆಟಿ ತಿಂಗಳ ಮಹತ್ವ ಹಾಗು ಹಬ್ಬದ ಆಚರಣೆಯ ಬಗ್ಗೆ ಸಭಿಕರಿಗೆ ವಿವರವಾಗಿ ತಿಳಿಸಿದರು . ಸಭಾ ಅದ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷ ಹರಿ ದೇವಾಡಿಗ ಮಾತನಾಡುತ್ತಾ 8 ತಿಂಗಳ ಹಿಂದೆ ಹುಟ್ಟಿದ ಈ ಸಂಘ ಈಗಾಗಲೇ 3 ಜನಪ್ರಿಯ ಕಾರ್ಯಕ್ರಮವನ್ನು ನಡೆಸಿ ಸಮಾಜ ಭಾಂದವರ ಪ್ರೀತಿಗೆ ಪಾತ್ರವಾಗಿದೆ , ಬೆಂಗಳೂರಿನ ವಿವಿದೆಡೆ ಇರುವ ದೇವಡಿಗರನ್ನು ಸಂಗಟಿಸಿ ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು ಎಂದರು , ಮುಂದಿನ ದಿನಗಳಲ್ಲಿ ದೇವಾಡಿಗ ನವೋದಯ ಸಂಘದ ನೇತ್ರತ್ವದಲ್ಲಿ ವಧು ವರರ ಸಮಾವೇಶ , ಉದ್ಯೋಗ ಶಿಭಿರ , ಪ್ರತಿಭಾ ವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು , ವಿಧ್ಯಾ ನಿಧಿ ಹಾಗು ತುರ್ತು ಅರೋಗ್ಯ ನಿಧಿ ಸ್ಥಾಪನೆ ಮಾಡುವ ಕುರಿತು ಮಾಹಿತಿ ನೀಡಿದರು . ವಿವಿಧ ಖಾದ್ಯಗಳನ್ನು ಸಿದ್ದಪಡಿಸಿ ತಂದಿದ್ದ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದ ಇವರು ದೇವಾಡಿಗ ನವೋದಯ ಸಂಘ ಪ್ರಜಪ್ರಬುತ್ವದ ಮಾರ್ಗದಲ್ಲಿ ಮುನ್ನಡೆಯುತ್ತಿದೆ ,ಮುಂದಿನ ದಿನಗಳಲ್ಲಿ ಜನೋಪಯೋಗಿ ಕೆಲಸಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಭಾಂಧವರಿಗೆ ನೆರವಾಗಬೇಕು ಎಂದು ಸದಸ್ಯರುಗಳಿಗೆ ಕರೆ ನೀಡಿದರು .

ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ವರಧಿ ಪ್ರಕಟಿಸಲು ಆಗಮಿಸಿದ ಟಿವಿ 9 ಮತ್ತು ಪಬ್ಲಿಕ್ ಟಿವಿ ವರದಿಗಾರರಿಗೆ ಕರಾವಳಿಯ ಸಾಂಪ್ರದಾಯಕ ಅಡಿಕೆ ಹಾಳೇ ಟೋಪಿ ನೀಡಿ ಗೌರವಿಸಲಾಯಿತು . ಸಂಘದ ಸಂಘಟನ ಕಾರ್ಯದರ್ಶಿ ನೋಡು ಸದಾನಂದ ಬೆಳಿಗ್ಗಿನ ಸಭಾ ಕಾರ್ಯಕ್ರಮ ನಿರೂಪಿಸಿದರು ,ಜೊತೆ ಕಾರ್ಯದರ್ಶಿ ಸುಧೀರ್ ದೇವಾಡಿಗ ಸ್ವಾಗತಿಸಿದರು , ಶ್ರೀಮತಿ ರತ್ನ ಸದಾನಂದ್ ಪ್ರಾರ್ಥನೆ ನಡೆಸಿಕೊಟ್ಟರು , ಉಪಾದ್ಯಕ್ಷ ಅಶೋಕ್ ಗಂಗೊಳ್ಳಿ ದನ್ಯವಾದಗೈದರು . ಸಭಾ ಕಾರ್ಯಕ್ರಮದ ನಂತರ ವೇದಿಕೆಯ ಮುಂಬಾಗದಲ್ಲಿ ನಡೆದ ಕಾಯಿ ಜೂಜು ಮತ್ತು ಚೆನ್ನೆಮಣಿ ಆಟ ಸಭಿಕರನ್ನು ಕೆಲ ಕಾಲ ಕರ್ನಾಟಕದ ಕರಾವಳಿಯತ್ತ ಕೊಂಡೊಯ್ದಿತ್ತು . ಮದ್ಯಾನ ಸಂಘದ ಸದಸ್ಯರು ಸಿದ್ದಪಡಿಸಿ ತಂದಿದ್ದ ಸುಮಾರು 60 ಬಗೆಯ ವಿವಿಧ ಖಾದ್ಯ ಗಳು ನೆರೆದಿದ್ದ ಸಮಾಜ ಭಾಂಧವರಿಗೆ ಊರಿನ ಹಬ್ಬದ ಊಟದ ರಸದೌತಣ ಉಣಬಡಿಸಿತ್ತು . ಮದ್ಯಾನದ ಭೋಜನದ ನಂತರ ಮಹೇಶ್ ತೀರ್ಥಹಳ್ಳಿ , ಚಂದ್ರ ಮರವಂತೆ, ಸುಧೀರ್ ದೇವಾಡಿಗ ಹಾಗು ಚರಣ್ ಬೈಂದೂರ್ ವಿವಿಧ ಮನೋರಂಜನ ಸ್ಪರ್ದೆಗಳನ್ನು ನಡೆಸಿಕೊಟ್ಟರು . ಪುಟಾಣಿಗಳಾದ ಕುಮಾರಿ ಮಾನ್ಯ, ಕುಮಾರಿ ಮನೋಜ್ಞ ಮತ್ತು ಕುಮಾರಿ ವಿದ್ಯಾಶ್ರೀ ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು . ನೆರೆದಿದ್ದ ಸಭಿಕರಿಗಾಗಿ ಮನೋರಂಜನಾ ಸ್ಪರ್ದೆಗಳಾದ ಸೂಜಿ ಯಲ್ಲಿ ದ್ರಾಕ್ಷಿ ಸಂಗ್ರಹಿಸುವುದು ,ಆದರ್ಶ ದಂಪತಿ , ಹುಡುಗಿಯರು ಹುಡುಗರಿಗೆ ಜುಟ್ಟು ಹಾಕುವುದು , ಸಂಗೀತ ಕುರ್ಚಿ , ನಾಣ್ಯ ಸಂಗ್ರಹಣೆ , ಅಡುಗೆ ಸ್ಪರ್ದೆ ,ಆಶು ಭಾಷಣ ,ಮೂಖಭಿನಯ , ದಂಪತಿಗಳ ಡಾನ್ಸ್ ಜಲಕ್ ನೆರೆದಿದ್ದ ಜನರನ್ನು ಮುದ ಗೊಳಿಸಿತ್ತು . ಈ ಸಂದರ್ಭದಲ್ಲಿ ಮದ್ಯಾನದ ಮನೋರಂಜನ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಸಂಘದ ಖಜಾಂಚಿ ಗೀತ ಮಂಜುನಾಥ್ ರವರನ್ನು ಅಭಿನಂದಿಸಲಾಯಿತು . ಬೆಳಿಗ್ಗೆ 9 ಗಂಟೆಗೆ ಆಗಮಿಸಿ ಹಬ್ಬದ ವಾತಾವರಣ ಸಿದ್ದಪಡಿಸಿ ಸಂಜೆ 6 ವರೆಗೂ ಉಪಸ್ಥಿತರಿದ್ದು ಈ ಒಂದು ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಹೃದಯಿ ಸಮಾಜ ಬಾಂಧವರಿಗೆ ಸಂಘದ ಪ್ರದಾನ ಕಾರ್ಯದರ್ಶಿ ಚಂದ್ರ ಮರವಂತೆ ಧನ್ಯ ವಾದ ತಿಳಿಸಿದರು

Coming soon..