Events


Aug 25th, 2019

ಶ್ರಾವಣ ಸಂಭ್ರಮ (ಸೋಣದ ಗೌಜಿ)

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಶ್ರಾವಣ ಸಂಭ್ರಮ (ಸೋಣದ ಗೌಜಿ) ಎಂಬ ಕಾರ್ಯಕ್ರಮವನ್ನು ಜೊತೆಗೆ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Aug 10th, 2014

ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ )

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರಿಗಾಗಿ ಆಷಾಡ ದಲ್ಲಿ ಒಂದು ದಿನ ( ಆಟಿಡ ಒಂಜಿ ದಿನ ) ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.


ಶ್ರಾವಣ ಸಂಭ್ರಮ (ಸೋಣದ ಗೌಜಿ)

ಮುದ್ದು ರಾಧಾಕೃಷ್ಣ ಪುಟಾಣಿಗಳ ತುಂಟಾಟ, ಕರಾವಳಿ ಖಾದ್ಯಗಳ ಜೊತೆ ಭರ್ಜರಿ ಊಟ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಕರಾವಳಿ ಕಂಪನ್ನು ಹರಡಿದ ದೇವಾಡಿಗ ನವೋದಯ ಸಂಘದ "ಶ್ರಾವಣ ಸಂಭ್ರಮ".

ಬೆಂಗಳೂರು: ದೇವಾಡಿಗ ಸಮಾಜ ಭಾಂದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮತ್ತು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಸಲುವಾಗಿ ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರು ಅಗಸ್ಟ್ 25 ರಂದು ಬೆಂಗಳೂರಿನ ವಿಜಯನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರಾವಣ ಸಂಭ್ರಮ (ಸೋಣದ ಗೌಜಿ) ಎಂಬ ಕಾರ್ಯಕ್ರಮವನ್ನು ಜೊತೆಗೆ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಸತ್ಯನಾರಾಯಣ ಪೂಜೆಯು ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್.ದೇವಾಡಿಗರವರ ನೇತೃತ್ವದಲ್ಲಿ ಸಮಾಜ ಭಾಂಧವರ ಸಮ್ಮುಖದಲ್ಲಿ ನೆರವೇರಿತು. ಸುಮಾರು 800ಕ್ಕೂ ಹೆಚ್ಚಿನ ದೇವಾಡಿಗ ಸಮಾಜದ ಸದಸ್ಯರು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಶ್ರೀಮತಿ ತ್ರಿವೇಣಿ ಕರುಣಾಕರ್ ಮತ್ತು ದಾಮಿನಿ ಕರುಣಾಕರ್ ಇವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಸುಧೀರ್ ಮುದ್ರಾಡಿ ಇವರು ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರನ್ನು ಸ್ವಾಗತಿಸಿದರು.ಯುವ ಘಟಕದ ಅಧ್ಯಕ್ಷರಾದ ಚರಣ್ ಬೈಂದೂರು ಇವರು ಸಂಘದ ಹುಟ್ಟು, ಬೆಳವಣಿಗೆ ಮತ್ತು ಮುಂದಿನ ಗುರಿಯ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್.ದೇವಾಡಿಗರವರ ಅಧ್ಯಕ್ಷತೆಯಲ್ಲಿ ಶ್ರೀ ರಮೇಶ್ ಕೆ.ಎನ್ (ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲಿಸ್) ರವರು ದೀಪ ಬೆಳಗಿಸಿ ಕರಾವಳಿ ಸಂಸ್ಕೃತಿಯಾದ ಹೊಂಬಾಳೆ ಬಿಡಿಸುವುದರ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಜೊತೆಗೆ ವಿಶೇಷ ಆಹ್ವಾನಿತರಾದ ಶ್ರೀ ನಾರಾಯಣ ದೇವಾಡಿಗ ಬಡಾಕೆರೆ(ಪ್ರಧಾನ ಕಾರ್ಯದರ್ಶಿ, ಕುಂದಾಪುರ ದೇವಾಡಿಗ ಮಿತ್ರ, ದುಬೈ), ದೇವಾಡಿಗ ಸಮಾಜದ ಹೆಮ್ಮೆಯ ಕನ್ನಡ ಚಿತ್ರನಟಿ ನಿಮಿಕಾ ರತ್ನಾಕರ್, ಶ್ರೀಮತಿ ಮೂಕಾಂಬು ದೇವಾಡಿಗ ಅಧ್ಯಕ್ಷರು, ಎಡ್ತೆರೆ ಗ್ರಾಮ ಪಂಚಾಯತ್, ಸಂಘದ ಗೌರವಾಧ್ಯಕ್ಷರಾದ ಶ್ರೀ ಹರಿ ದೇವಾಡಿಗ, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಮಂಜುನಾಥ್ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಹರಿ ದೇವಾಡಿಗರವರು ವೇದಿಕೆ ಹಂಚಿಕೊಂಡರು. ಉದ್ಘಾಟನಾ ಭಾಷಣ ಮಾಡಿದ ಶ್ರೀ ರಮೇಶ್ ಕೆ.ಎನ್ ಅವರು ಸಂಘದ ಕಾರ್ಯವೈಖರಿಯನ್ನು ಕೊಂಡಾಡಿದರು. ಯುವಕರಿಗೆ ಉತ್ತಮ ಸಂಘಟನೆಗೆ ಬೇಕಾದ ಸಲಹೆ ಸೂಚನೆ ಮತ್ತು ತಾಯಿಯ ಮಹತ್ವದ ಬಗ್ಗೆ ಅರಿವು ನೀಡಿದರು. ಸಂಘದ ಯಾವುದೇ ಸದಸ್ಯರಿಗೆ ತೊಂದರೆ ಆದಲ್ಲಿ ಕಾನೂನು ರೀತಿಯ ರಕ್ಷಣೆಗೆ ತಾವು ನೀಡುದಾಗಿ ಭರವಸೆ ಮತ್ತು ಅದರ ಉಪಯೋಗ ಪಡೆಯಲು ಮನವಿ ಮಾಡಿದರು. ನಂತರ ಶ್ರೀ ನಾರಾಯಣ ದೇವಾಡಿಗ ಬಡಾಕೆರೆಯವರು ತಮ್ಮ ಭಾಷಣದಲ್ಲಿ ಸಂಘದ ಮತ್ತು ಸದಸ್ಯರ ಏಳಿಗೆಗಾಗಿ ತಾವು ಸಂಪೂರ್ಣ ಸಹಕಾರ ನೀಡುದಾಗಿ ತಿಳಿಸಿದರು. ಚಿತ್ರ ನಟಿ ನಿಮಿಕಾ ರತ್ನಾಕರ್ ಅವರು ಸಂಘ ಒಗ್ಗಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುವಜೊತೆಗೆ ತಮ್ಮ ಚಿತ್ರವನ್ನ ಎಲ್ಲರು ನೋಡಿ ಪ್ರೊತ್ಸಾಹಿಸಲು ಮನವಿ ಮಾಡಿದರು.ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಬಿ.ಆರ್ ದೇವಾಡಿಗರವರು ದೇವಾಡಿಗ ಸಮಾಜದ ಆಗಿನ ಮತ್ತ ಈಗಿನ ಬೆಳವಣಿಗೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಮುಂದಿನ ಮುಖ್ಯ ಅಂಗವಾದ ವಿಧ್ಯಾರ್ಥಿ ವೇತನ ಕಾರ್ಯಕ್ರಮವನ್ನು ಕೋಶಾಧಿಕಾರಿಯಾದ ಶ್ರೀ ಮಂಜುನಾಥ್ ದೇವಾಡಿಗ ನಿರೂಪಿಸಿದರು. ನಾರಾಯಣ ದೇವಾಡಿಗ ಬಡಾಕೆರೆಯವರು ಅರ್ಹ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸುಮಾರು 25 ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ನಂತರದಲ್ಲಿ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಕೊನೆಯಲ್ಲಿ ಶ್ರೀಮತಿ ಪುಷ್ಪಾ ಉಮೇಶ್ ಅವರು ಗಣ್ಯರಿಗೆ ಮತ್ತು ಸಭಿಕರಿಗೆ ಧನ್ಯವಾದ ಸಮರ್ಪಣೆ ಮಾಡಿ ಸಭಾಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ದೇವಾಡಿಗ ಬೈಂದೂರುರವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, 6ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದು ರಾಧಾಕೃಷ್ಣ ಸ್ಪರ್ಧೆ ಏರ್ಪಡಿಸಲಾಯಿತು. ಸುಮಾರು 20ಕ್ಕೂ ಹೆಚ್ಚಿನ ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ದೇವಾಡಿಗ ಸಮಾಜದ ಖ್ಯಾತ ಸ್ಯಾಕ್ಸೋಫೋನ್ ವಾದಕಿ ಶ್ರೀಮತಿ ಐಶ್ವರ್ಯ ಮುದ್ರಾಡಿ ಮತ್ತು ತಂಡದವರು "ಸಂಗೀತ ಸಂಭ್ರಮ" ಸ್ಯಾಕ್ಸೋಫೋನ್ ವಾದ್ಯಗೋಷ್ಠಿ ನಡೆಸಿಕೊಟ್ಟರು.

ನಂತರದಲ್ಲಿ ಕಾರ್ಯಕ್ರಮಕ್ಕೆ ಆಗಮೊಸಿದ ಸುಮಾರು 800 ಕ್ಕೂ ಹೆಚ್ಚಿನ ಸಮಾಜ ಭಾಂದವರಿಗಾಗಿ ಕರಾವಳಿ ಶೈಲಿಯ ಶ್ರಾವಣದ ವಿವಿಧ ಬಗೆಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೂಡೆ,ಪತ್ರೊಡೆ,ಕೊಟ್ಟೆ ಕಡುಬು,ಅರಸಿನ ಎಲೆ ಕಡುಬು, ನೀರ್ ದೋಸೆ ಮುಂತಾದ ವಿವಿಧ ಬಗೆಯ ಕರಾವಳಿ ಖಾದ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಮುಂದೆ ಸಮಾಜದ ಪ್ರತಿಭಾವಂತ ಸದಸ್ಯರಿಂದ ನೃತ್ಯ, ಹಾಡುಗಾರಿಕೆ, ಕಿರುನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಕೊನೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರಿಗೆ ಫ್ಯೂಚರ್ ಟ್ಯಾಬ್ ಮಾಲಿಕರಾದ ರೀತೇಶ್ ದೇವಾಡಿಗ ಮತ್ತು ಸಂಘಟನ ಕಾರ್ಯದರ್ಶಿಯಾದ ಪ್ರಜ್ವಲ್ ಬೈಂದೂರು ಇವರ ಪ್ರಾಯೋಜಕತ್ವದಲ್ಲಿ 'ಲಕ್ಕಿ ಡ್ರಾ' ಮಾಡಲಾಯಿತು. ವಿಜೇತರಾದ ಎರಡು ಸದಸ್ಯರಿಗೆ ಒಂದು ಗ್ರಾಮ್ ಚಿನ್ನದ ನಾಣ್ಯಗಳನ್ನು ನೀಡಲಾಯಿತು. ಸತ್ಯನಾರಾಯಣ ಪೂಜೆ, ಮುದ್ದು ರಾಧಾಕೃಷ್ಣ ವೇಷ, ಕರಾವಳಿ ಪ್ರದೇಶದಲ್ಲಿ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮತ್ತು ತಿಂಡಿ ತಿನಿಸುಗಳ ಪ್ರದರ್ಶನ, ಇವೆಲ್ಲವೂ ಕೆಲಸದ ನಿಮಿತ್ತ ಬೆಂಗಳೂರು ಸೇರಿದ ದೇವಾಡಿಗ ಸಮಾಜ ಭಾಂದವರಿಗೆ ಹಬ್ಬದ ವಾತಾವರಣ ಮತ್ತು ತಮ್ಮೂರಿನ ನೆನಪು ಹುಟ್ಟಿಸಿತು.

Coming soon..